ಪ್ರೀತಿಯಿಂದ ರಮೇಶ್ ಗುಣಕುಮಾರ್ ನಿರ್ದೇಶಿಸಿದ ಮತ್ತು ಎನ್. ರವಿಕುಮಾರ್ ನಿರ್ಮಿಸಿದ 2010 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಮಣಿತು ಚೌಧರಿ ಮತ್ತು ಸುಮಾ ಗುಹಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕಥೆಯು ಹಾಲಿವುಡ್ ಚಲನಚಿತ್ರ, ನೋರಾ ಎಫ್ರಾನ್ ನಿರ್ದೇಶಿಸಿದ ಟಾಮ್ ಹ್ಯಾಂಕ್ಸ್ ಮತ್ತು ಮೆಗ್ ರಯಾನ್ ನಟಿಸಿದ ಯು ಹ್ಯಾವ್ ಗಾಟ್ ಮೇಲ್ (1998) ನಿಂದ ಪ್ರೇರಿತವಾಗಿದೆ ಈ ಚಲನಚಿತ್ರವು 14 ಮೇ 2010 ರಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ವಿಮರ್ಶಾತ್ಮಕ ಮತ್ತು ವಾಣಿಜ್ಯಾತ್ಮಕ ಎರಡೂ ದೃಷ್ಟಿಗಳಲ್ಲಿ ವಿಫಲವಾಗಿತ್ತು. == ಪಾತ್ರವರ್ಗ == ರಮೇಶ್ / ಅರವಿಂದ್ ಪಾತ್ರದಲ್ಲಿ ರಮೇಶ್ ಅರವಿಂದ್ ಪರಿ/ಪ್ರೀತಿಯಾಗಿ ರಮಣಿತು ಚೌಧರಿ ಸುಮಾ ಗುಹಾ ಕಿರಣ್ ಶ್ರೀನಿವಾಸ್ ರಂಜಿತಾ ಪೃಥ್ವಿರಾಜ್ ಸದಾಶಿವ ಬ್ರಹ್ಮಾವರ್ == ಧ್ವನಿಮುದ್ರಿಕೆ == ಎಲ್ಲಾ ಹಾಡುಗಳಿಗೆ ಎಟಿ ರವೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. 5 ಹಾಡುಗಳನ್ನು ಒಳಗೊಂಡಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಇಂಡಿಯಾಗ್ಲಿಟ್ಜ್ ವಿಮರ್ಶೆಗಳು ಟೈಮ್ಸ್ ಆಫ್ ಇಂಡಿಯಾ ವಿಮರ್ಶೆಗಳು